ins class="adsbygoogle" style="display:block" data-ad-client="ca-pub-1379007159812977"

मंगलवार, 15 दिसंबर 2020

नाम: सरोजा मेटी लोड़ाया

नाम : सरोज  मेटी लोडाया।  कर्नाटक       

जन्म :1 मई, पिता:हालेश, माता: शकुंतला, पति:अश्विन लोडाया शिक्षा: एम बी एड, एम फिल, पी एच डी, संप्रति: उपन्यासिका साहित्य सेवा: कन्नड और हिंदी भाषा में आलेख ,कविता कहानी आदि। प्रतिष्ठित पत्र पतत्रिकाओं में आलेख कविताएँ प्रकाशित। कर्नाटक के कन्नड़ भाषा की पत्रिका प्रजावाणी में शिक्षा आलेख प्रकाशित। पुस्तक प्रकाशित: 'कृष्णा से नील तक 'कवन संकलन प्रकाशित। 'गार्गी' कृष्ण बजाज, विशेष सम्मान, नील पुत्री सम्मान, आदि गौरव प्राप्त। 

भाषा : कन्नड़ 

*************

1.'ಕರುನಾಡು '

****************

ಕರುನಾಡ ಚೆಲುವ ಒಮ್ಮೆ ನೋಡ 

ಕರುಣೆಯ ಒಲವೆ ನಮ್ಮ ಸೊಗಡ

ಹೃದಯವಂತಿಕೆಯೆ ನಮ್ಮ ಸಿರಿವಂತಿಕೆ

ಆಶ್ರಯ ಕೊಡುವುದೇ ನಮ್ಮ ಸಜ್ಜನಿಕೆ 

ಅಹಿಂಸೆ ನಮಗೆ ಪರಮಧರ್ಮ 

ಪರಿಶ್ರಮವೆ ನಮ್ಮಅಚಲಕರ್ಮ 

ಪರರು ನಮ್ಮವರೆಂಬ 

ಸಚ್ಛರಿತ್ರೆಯುಳ್ಳವರು 

ತಿಳಿಯಬೇಡಿ ಇದು ನಮ್ಮ 

ಬಲಹೀನತೆ ಎಂದು

ಕಳಂಕ  ತಂದರೆ ನಾಡಿಗೆ ಬಿಡೆವು 

ಕೆಚ್ಚೆದೆಯ ಕನ್ನಡಿಗರು ಸಿಡಿದೆದ್ದೆವು 

ತಾರತಮ್ಯ ನಮ್ಮಲಿ ಇಲ್ಲ 

ಹಿಂಸಾಚಾರ ನಮಗೆ ಸಲ್ಲ 

ಗಡಿನಾಡು ನಡುನಾಡು ಎಲ್ಲೆ ಇರಲಿ 

ಅಡಿ -ಅಡಿಯಲಿ ಕನ್ನಡದ ಕಂಪು ಪಸರಿಸಲಿ 

ವೀರ ಕನ್ನಡಿಗರು ನಾವು 

ಅಮರ ಕರುನಾಡಿಗರು ನಾವು 

ಸತ್ವ ಪರೀಕ್ಷೆಗೆ ಸದಾ ನಾವು ಸಿದ್ಧ 

ನಾಡತಾಯ ರಕ್ಷಣೆಗೆ  ಎಲ್ಲರು ಬದ್ದ 

ತಾಯಿ ಭಾರತೀಯ ಸುತೆ ಕನ್ನಡತಿ 

ಎಲ್ಲರಿಗೂ ಸದ್ಮತಿ ಕೊಡು ತಾಯಿ ಭಾರತಿ 


2. ''ನಮ್ಮಕರುನಾಡ -ಕಾಶ್ಮೀರ ''

*********************

ನೆರೆ ಅಬ್ಬರಕೆ ತತ್ತರಿಸಿ ನಲುಗಿದೆ 

ನಮ್ಮ ಕರುನಾಡ  ಕಾಶ್ಮೀರ

ಮುಗಿಲ ಮುತ್ತುಗಳು 

ಅಲೆಯಾಗಿ ಉದುರಿ -ಚದುರಿ, 

ನುಂಗಿವೆ ನಮ್ಮ ಕರುನಾಡ -ಕಾಶ್ಮೀರ

ಯಾರನು ಕೇಳಲಿ ಕಪಿಲೆಗೊ- ಕಾವೇರಿಗೊ? 

ಯಾವ ಜನ್ಮದ ಕೋಪ -

ದ್ವೇಷ  ತಾಯಿ ನಿನ್ನದು! 

ಇದು ಬಾನಿನ ವೇದನೆಯೋ, 

ಭೂಮಿಯ ಆಕ್ರೋಶವೊ? 

ಬರಸಿಡಿಲು ಬಡೆದಂತೆ ಎರಗಿದೆ 

ಜೀವ ನುಂಗಿ ನೀರು ಕುಡಿಯುವುದೆ, 

ಕುಣಿ -ಕುಣಿದು, ನಲಿ- ನಲಿದು 

ಧರೆಗಿಳಿದರೆ ನೂರಾರು  

ಜಲಪಾತಗಳು ಕಣ್ಣು ತುಂಬಿದವು ಅಂದು ,

ಹೊಲ ಗದ್ದೆಗಳು ಹಸಿರ ಚಪ್ಪರ 

ಕಟ್ಟಿ ರೈತನ ಉಸಿರಾದವು, 

ಇಂದು ಉತ್ತಿ -ಬಿತ್ತಿದ ಹೊಲವೆಲ್ಲ ನೀರಾಗಿ 

ಮನೆ -ಮಠಗಳೆಲ್ಲ ಜಲಪಾತದ ಕಣ್ಣೀರಾಗಿ ,

ತಪ್ಪುಒಪ್ಪುಗಳು ನಮ್ಮವು ಎನೆ ಇರಲಿ 

ಮನ್ನಿಸಿ ನಮ್ಮನು ಇನ್ನು, 

ತುತ್ತು ಅನ್ನ, ಗುಟುಕು 

ನೀರು ಕುಡಿಯಲು ಹರಸು ನಮ್ಮನು. 

ಎಳಿ ಬಂಧುಗಳೆ ಇನ್ನಾದರು 

ಎಚ್ಚೆತ್ತುಕೊಳ್ಳೊಣ 

ಪ್ರಕೃತಿಮಾತೆಯ ಪೂಜಿಸೋಣ

ಸುಂದರ ಬದುಕು ಕಟ್ಟಿ ಕೊಳ್ಳೋಣ. 

कोई टिप्पणी नहीं:

एक टिप्पणी भेजें